ನನ್ನೆದೆ ಬಡಿತ ನನ್ನೆದೆಯ
ಉಸಿರು ನೀನೇ ಕಣೆ
ಕಣ್ಣ ಹನಿಯ ಈ ಕಥೆಗೆ
ಆಗು ನೀನೇ ಹೊಣೆ
ನೀನಾಗು ಎಲ್ಲಾ ನೀನಾಗು
ನನ್ನ ಜೀವದ ಸಂಗಾತಿ
ನೋವಲ್ಲು ಆ ನಗುವಲ್ಲು
ನೀ ಇರುವೆಯಾ ಜೊತೆಯಲಿ
ಬೇಡ ಬೇಡ ನಿನ್ನಿರದ
ಲೋಕನೆ ನೀ ಮರೆತುಬಿಡು
ನಿನ್ನ ಪ್ರೀತಿನ ಮಾಡಿರುವೆ
ತಪ್ಪು ನನ್ನದೇ ಕ್ಷಮಿಸಿ ಬಿಡು
ನೀನೇ ಇರದ ಈ ಪಯಣ
ನಾನೀಗ ಶೂನ್ಯ ಕಣೆ
ಮೊದಲೇ ಸೋತು ಹೋಗಿರುವೆ
ಬಲಿ ಕೊಡಲೇ ಬೇಡ ಕಣೆ
ನಿನ್ನೆ ನಾಳೆಯ ಅರಿವಿಲ್ಲದೆ
ನೀಡಿರುವೆ ನಿಜ ಪ್ರೀತಿಯನು
ಕ್ಷಣನು ಯೋಚನೆ ಮಾಡದೆ
ಮಾಣ್ಣು ಮಾಡಿದೆ ಸರಿಯೇನು
ನಲ್ಲೆ ನಿನ್ನಯ ಪ್ರೀತಿ
ನನಗಿನ್ನೂ ಬೇಕು ಕಣೆ
ಕೋಟಿ ಜನ್ಮ ಬಂದರುನು
ನನ್ನ ಹುಡುಗಿ ನೀನೇ ಕಣೆ
ನನ್ನೆದೆ ಬಡಿತ ನನ್ನೆದೆಯ
ಉಸಿರು ನೀನೇ ಕಣೆ